ಕೆಜಿಎಫ್ ೨: ಸಂಜಯ್ ಅವರ ಅಧೀರಾನ ಪೋಸ್ಟರ್ ಬಿಡುಗಡೆ

Please follow and like us:
Whatsapp

ಚಂದನವನದಲ್ಲಿ ಸಾಕಷ್ಟು ಹೈಪ್ ಸೃಷ್ಟಿಸಿರುವ ಕೆಜಿಎಫ್ ೨ ಚಿತ್ರದ ಚಿತ್ರೀಕರಣದ ವೇಳೆಯೇ ಭಾರಿ ಸುದ್ದಿ ಮಾಡುತ್ತಿದೆ. ಈಗಾಗಲೇ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅವರು ನಟಿಸುತ್ತಿರುವ ವಿಷಯ ಬಹಿರಂಗವಾದ ಬೆನ್ನಲೇ ಇಂದು ಸಂಜಯ್ ಅವರ ಅಧೀರಾನ ಪೋಸ್ಟರ್ ಬಿಡುಗಡೆಯಾಗಿದೆ.

ಕೆಜಿಎಫ್ ಚಾಪ್ಟರ್ ೧ ಈಗಾಗಲೇ ಸಖತ್ ಸದ್ದು ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರೀ ಹೆಸರು ಮಾಡಿದ ಸಿನಿಮಾ. ಇನ್ನು ಕೆಜಿಎಫ್ ಚಾಪ್ಟರ್ ೨ ಚಿತ್ರೀಕರಣ ಭರದಿಂದ ಸಾಗಿದ್ದು, ಈಗಾಗಲೇ ಹಲವಾರು ಸುದ್ದಿಗಳಿಂದಲೇ ಕೆಜಿಎಫ್-೨ ಸಿನಿಮಾ ಮಾಡುತ್ತಿದೆ. ಚಿತ್ರದಲ್ಲಿ ವಿಲನ್ ಆಗಿ ಸಂಜಯ್ ದತ್ತ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದು, ಕೆಜಿಎಫ್ ಅಧ್ಯಾಯ೧ರಲ್ಲಿ ಬಹಳ ಕುತುಹಲ ಕೆರಳಿಸಿದ್ದ ಅಧೀರನ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಅದಕ್ಕೂ ಮುಂಚೆ ಇಂದು ಅಧೀರನ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಅಧೀರ ಲುಕ್‌ಗೆ ಫಿದಾ ಆಗಿದ್ದಾರೆ. ಪೋಸ್ಟರ್‌ನಲ್ಲಿ ಸಂಜಯ್ ದತ್ ಅವರು ಖಡಕ್ ಆಗಿ ಕಾಣಸಿಕೊಂಡಿದ್ದು, ರಾಕಿ ಬಾಯ್‌ಗೆ ಮಾನಸ್ಟರ್ ವಿಲನ್ ಆಗಿ ತೊಡೆ ತಟ್ಟಲು ಮುಂದಾಗಿದ್ದಾರೆ.

sಸಂಜಯ್ ಹುಟ್ಟುಹಬ್ಬಕ್ಕೆ ಉಡುಗೊರೆ

ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಸಂಜಯ್ ದತ್‌ಗೆ ಕೆಜಿಎಫ್ ಚಾಪ್ಟರ್ ೨ ಚಿತ್ರತಂಡ ಈ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉಡುಗೊರೆಯಾಗಿ ನೀಡಿದೆ. ಈ ಹಿಂದೆ ಚಿತ್ರತಂಡ ಕೇವಲ ಅಧೀರ ಉಂಗುರ ತೊಟ್ಟ ಕೈ ಮುಷ್ಠಿ ಇರುವ ಪೋಸ್ಟರ್ ಅನ್ನು ಮಾತ್ರ ಬಿಡುಗಡೆ ಮಾಡಿತ್ತು. ಆದರೆ ಸಂಜಯ್ ಅವರ ಔಟ್‌ಲುಕ್ ಇರುವ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್ ಬಿಡುಗಡೆಯಿಂದ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು

Please follow and like us:
Whatsapp

Leave a Reply

Your email address will not be published. Required fields are marked *

Whatsapp